Karthik Hebbar

“All art is a kind of confession”

James Baldwin

After ages I have come out of the Theater feeling content and full! Watching SWATI MUTTINA MALE HANI felt like listening to an alaap of todi or bhairavi in the dhrupad style. It is very deeply contemplative, meditative and intense. It is an absolute delight to find this silence, atmospherics and poise in the society that we live in.

The movie is brimming with beautiful writing, measured performances and powerful music. The background score by Midhun Mulundan is a strong voice in the film. Narayan Sharma pulls at our heart strings with melancholic melodies flowing through the violin. The songs by Madhuri Seshadri and Siddhartha Belamannu lay a beautiful path for this visual poetry to traverse through.

The conflicting visuals of lush greenery bouncing with life as opposed to the close concrete walls full of suffocating humans are bridged through windows of hope and perspectives. People awaiting physical death and people who are already dead from the inside are indulging in a never-ending dance of sorts. The mundane, habitual, ritualistic life is challenged by a breath of fresh air! And this breeze brings with it love, poetry, innocence and a yearning for freedom. The characters embrace the absurdity of life whilst battling emotions and morality. They learn to embrace and fall in love with death. Death shines in its most demystified, humane and starkly truthful form. This movie is in-fact a beautiful love letter to death!

It was intriguing to watch just the saga of dosa narrating a whole narrative of its own. Something as simple as preparing a dosa transforms from a mere habit, to an act of love, to an act of extending friendship, to an act of motherly affection and an act of meditative indulgence. Relationships are handled with dignity and sensitivity. When a woman is subservient and compromising, she looks mature but when she chooses her independence and truth, she begins to look immature and irresponsible to a man and through this simple metaphor the writer holds the mirror to internalised patriarchy of society. My favourite parts of the film though were the trembling, tender old man and the precious mother and Prabhakar, all brilliantly performed by brilliant actors. Balaji Manohar and Surya Vasishta leave a significant presence.   Siri delivers a top-notch performance and holds the film together! Raj Shetty is understated and endearing.

The windows, the flowers, the rain drops, fog, the book of Ramana Maharshi all speak their own stories to an invested audience! So much has been said about the slowness of the film and I find it absurd that people act as if there is a standard pace for story telling in general! Who decides what is a fast, moderate or slow pace? Why must every film shout and be aggressive? When every movie is trying to be a blockbuster Biryani, here is a movie which is the quintessential curd rice! The movie moved me in many places and left me feeling like I have read a Herman Hesse’s Siddhartha! This gives me hope! Amidst celebrating toxic masculinity, aggression, dangerous aspects like stalking  and vulgar display of homophobia as great cinema, this film comes as a pleasant surprise.  This film reassures me that cinema for cinema’s sake is still possible

Please don’t miss this gem of a movie

ಬಹಳ ದಿನಗಳ ನಂತರ ಸಿನೆಮಾ ಥಿಯೇಟರ್ನಿಂದ ಆಚೆ ಬಂದಾಗ ನನ್ನೊಳಗೆ ನೆಮ್ಮದಿ, ತೃಪ್ತಿ ಇತ್ತು. ಸ್ವಾತಿ ಮುತ್ತಿನ ಮಳೆ ಹನಿಯನ್ನ ನೋಡಿದ್ದು, ಬರೀ ತಂಬೂರಿ ಶೃತಿಯೊಂದಿಗೆ ರುದ್ರ ವೀಣೆಯಲ್ಲಿ, ಧೃಪದ್ ಶೈಲಿಯಲ್ಲಿ, ತೋಡಿಯೋ ಭೈರವಿಯೋ ಕೇಳಿದ ಹಾಗಾಯ್ತು. ಈ ಸಿನೆಮಾ ಒಂದು ಆಳವಾದ, ವಿಚಾರಾತ್ಮಕವಾದ, ಚಿಂತನೆ ಹಾಗೂ ಧ್ಯಾನ ಎಂದೇ ಹೇಳಬಹುದು. ಒಂದು ಆಪ್ತ ವಾತಾವಾರಣ, ಆ ವಾತಾವಾರಣದ ನಿಘೂಢತೆ, ಮೌನ, ನಿಲುಗಡೆ, ಇವೆಲ್ಲವೂ ಅಪ್ಯಾಯಮಾನವಾಗಿತ್ತು. ನಮ್ಮ ಈಗಿನ ಓಟದ ಜೀವನ ಶೈಲಿಗೆ ಇಂಥಾ ಕಥೆಗಳು ಬೇಕು!

ಸೊಗಸಾದ ಬರವಣಿಗೆ, ಸಂಗೀತ ಮತ್ತು ಸೂಕ್ತ ನಟನೆಗಳಿಂದಾಗಿ ಈ ಚಿತ್ರ ಹೆಚ್ಚು ಹತ್ತಿರ ಅನ್ನಿಸುತ್ತದೆ. ಮಿದುನ್ ಮುಕಂದನ್ ಅವರ ಹಿನ್ನಲೆ ಸಂಗೀತ, ಈ ಚಿತ್ರದ ಒಂದಯ ಮುಖ್ಯ ಪಾತ್ರ ಹೌದು! ನಾರಾಯಣ್ ಶರ್ಮಾ ಅವರು ತಮ್ಮ ಸುಮಧುರ ಪಿಟೀಲು ನುಡಿಸಾಣಿಕೆಯಿಂದಾ ನಮ್ಮ ಹೃದಯ ತಂತಿಗಳನ್ನೇ ಮೀಟಿಬಿಡುತ್ತಾರೆ. ಮಾಧುರಿ ಶೇಷಾದ್ರಿ ಮತ್ತು ಸಿದ್ಧಾರ್ಥ ಬೆಲಮಣ್ಣು, ಇವರ ಗಾಯನ ಈ ದೃಶ್ಯ ಕಾವ್ಯಕ್ಕೆ ಕಿರೀಟ ಇಟ್ಟಂತೆ.

ಹೊರಗಿನ ಮುಕ್ತ ಹಸಿರು ಜೀವರಾಶಿಗೆ ತದ್ವಿರುದ್ಧವಾಗಿ ಸೀಮೆಂಟು ಗೋಡೆಗಳೊಳಗೆ ಬಂಧಿಗಳಾಗಿ , ಉಸಿರು ಕಟ್ಟುತ್ತಾ ಬದುಕುತ್ತಿರುವ ಮನುಶ್ಯರ ನಡುವೆ ಸೇತುವೆಯಾಗಿ ನಿಂತಿರುವ ಕಿಟಕಿಗಳು ಆಶಾಕಿರಣ, ಮತ್ತು ಹೊಸ ದೃಷ್ಟಿಕೊನಗಳಾಗಿ ಕಂಗೊಳಿಸುತ್ತವೆ. ಸಾಯಲಿ ಕಾಯುತ್ತಿರುವವರು, ಸತ್ತಂತೆ ಬದುಕುತ್ತಿರುವವರಿಗೆ ಜೀವನ ಪಾಠ ಕಲಿಸುತ್ತಾರೆ. ದಿನನಿತ್ಯದ ರಸಹೀನ ಜೀವನದೊಳಗೆ ಹೊಸತನದ ಗಾಳಿ ಬೀಸುತ್ತದೆ, ತನ್ನೊಂದಿಗೆ ಹೊಸ ಉಸಿರು, ಕಾವ್ಯ, ಪ್ರೀತಿ, ಮುಗ್ಧತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹಾತೊರುವಿಕೆಯನ್ನೂ ಕರೆತರುತ್ತದೆ. ಬದುಕಿನ ಅಬದ್ಧ ಸತ್ಯವನ್ನು ಹತ್ತಿರದಿಂದ ಕಾಣುವ ಪಾತ್ರಗಳು, ತೀವ್ರ ಭಾವನೆಗಳ ಹಾಗೂ ನೈತಿಕತೆಯ ಗೊಂದಲಗಳ ಸೆಣೆದಾಟದಲ್ಲಿ ತೊಡಗಿಸಿಕೊಂಡಿರುತ್ತವೆ. ಈ ಪಾತ್ರಗಳು ಸಾವನ್ನು ಅಪ್ಪಿ ಸ್ವಾಗತಿಸಲು ಸಿದ್ಧವಾಗಿರುತ್ತವೆ. ಮೃತ್ಯು ತನ್ನ ನಿಜ ರೂಪದಲ್ಲಿ, ಎಲ್ಲಾ ಮುಖವಾಡಗಳನ್ನು ಕಳಚಿ ನಿಂತಂತೆ ಭಾಸವಾಗುತ್ತದೆ. ಮೃತ್ಯುವನ್ನು ಮನುಷ್ಯ ಜೀವನದ ಒಂದು ಸತ್ಯವನ್ನಾಗಿ ಮಾತ್ರ ನೋಡುವ ಈ ಸಿನೆಮಾ, ಸಾವಿಗೆಂದೇ ಬರೆದಿಟ್ಟ ಒಂದು ಪ್ರೇಮ ಪತ್ರವೆಂದೇ ಹೇಳಬಹುದು.

ದೊಸೆ ಹಾಕುವ ಒಂದು ದೈನಂದಿಕ ಚಟುವಟಿಕೆ ಒಂದು ಕಾಮನ ಬಿಲ್ಲಿನಂತೆ ತೆರೆದುಕೊಳ್ಳುವುದನ್ನು ನೋಡೋದೇ ಹಿತ ಎನಿಸುತ್ತದೆ. ಕೇವಲ ಸಹಜವಾಗಿ ಮಾಡುವ ಒಂದು ಕ್ರಿಯೆಯಾಗಿ, ಒಮ್ಮೆ ಪ್ರೇಮವಾಗಿ, ಒಮ್ಮೆ ಸ್ನೇಹಕ್ಕೆ ತೆರೆದಿಟ್ಟ ಬಾಗಿಲಾಗಿ, ಮಮತೆಯಾಗಿ, ಧ್ಯಾನವಾಗಿ, ಹೀಗೆ ಹಲವು ಬಣ್ಣಗಳಾಗಿ ತೆರೆದುಕೊಳ‌್ಳುತ್ತದೆ. ಸಂಬಂಧಗಳನ್ನು ಸುಕ್ಷ್ಮತೆ ಮತ್ತು ಘನತೆಯಿಂದ ಸೆರೆಹಿಡಿಯಲಾಗಿದೆ. ಹಣ್ಣು ಸುಮ್ಮನಿದ್ದರೆ “ಮೆಚ್ಯೂರ್” ಎಂದು, ಮುಕ್ತಾವಗಿ ನಡೆದುಕೊಂಡ ಕೂಡಲೆ ಬೇಜವಾಬ್ದಾರಿತನವೆಂದು ಕಾಣುವ ಪುರುಷಪ್ರಧಾನ ಸಮಾಜಕ್ಕೆ ಕನ್ನಡಿಯಾಗಿ ನಿಲ್ಲುತ್ತದೆ ಈ ಚಿತ್ರ. ನನಗೆ ತುಂಬಾ ಹತ್ತಿರ ಎನ್ನಿಸಿದ್ದು ಮುದಿತನದಿಂದ, ಬೆಂದು ಬಾಡಿ, ನಡುಗಿತ್ತಿರುವ ಅಂಕಲ್, ಮುದ್ದಾದ ಅಮ್ಮ ಹಾಗೂ ಪ್ರಭಾಕರ್! ಈ ಪತ್ರಗಳನ್ನು ಸುಂದರ ನಟನೆಯಿಂದ ಕಲಾವಿದರು ಮೆರೆಸಿದ್ದಾರೆ. ಬಾಲಾಜಿ ಮತ್ತು ಸೂರ್ಯ ವಸಿಷ್ಠ ಮನಸ್ಸಿನಲ್ಲಿ ಉಳಿಯುತ್ತಾರೆ. ಸಿರಿಯವರ ಅತ್ಯುತ್ತಮ ನಟನೆ, ಸಿನೆಮಾವನ್ನು ಹಿಡಿದಿಟ್ಟಿರುತ್ತದೆ. ರಾಜ್ ಶೆಟ್ಟಿಯವರು ಬಹಳ ಇಷ್ಟವಾಗಿ ಬಿಡ್ತಾರೆ.

ಕಿಟಕಿಗಳು, ಹೂವುಗಳು, ಮಳೆ ಹನಿ, ಮಂಜು, ರಮಣ ಮಹರ್ಷಿಗಳ ಪುಸ್ತಕ, ಇವೆಲ್ಲವೂ ಕೂಡ ತಮ್ಮದೇ ಕಥಡಯನ್ನು ಹೇಳುತ್ತಿರುತ್ತವೆ. ಬಹಳ ಮಂದಿ ಇದೊಂದು ಸ್ಲೋ ಚಿತ್ರವೆನ್ನುತ್ತಾರೆ, ನನಗೇನೋ ಅದು ಬಹಳ ಅಬದ್ಧವೆನಿಸುತ್ತದೆ. ಸಿನೆಮಾಗೆ ಸಾರಿಯಾದ ಲಯ ಯಾವುದು ಎಂದು ನಿರ್ಧರಿಸುವವರು ಯಾರು? ಯಾವುದಾದರೊಂದು ಲಯ ನಿರ್ದಿಷ್ಠವಾಗಿ ನಿಗಧಿಯಾಗಿದೆಯೇ? ಎಲ್ಲಾ ಸಿನೆಮಾಗಳೂ ಅಬ್ಬರ ಅಥವಾ ಭರದಿಂದ ಕೂಡಿರಬೇಕೆ? ಬ್ಲಾಕ್ ಬಸ್ಟರ್ ಬಿರಿಯಾನಿಗಳ ಮಧ್ಯೆ ತನ್ನ ಸೌಮ್ಯತೆಯಿಂದ ಮೆರೆಯುವ “ಮೊಸರನ್ನ” ಈ ಚಿತ್ರ. ಬಹಳಷ್ಟು ಬಾರಿ ನನ್ನ ಕಣ್ಣುಗಳು ತೇವವಾಗಿದ್ದವು, ಒಟ್ಟಾರೆ ಹರ್ಮನ್ ಹೆಸ್ ಅವರ ಸಿದ್ಧಾರ್ಥ ಪುಸ್ತಕ ಓದಿದ ಅನುಭವವಾಯಿತು. ಬರೀ ಟಾಕ್ಸಕ್ ಮಸ್ಕ್ಯುಲಾನಿಟಿಯನ್ನು, ಸ್ಟಾಕಿಂಗ್ ಮುಂತಾದ ಅಪಾಯಕಾರಿ ಅಭ್ಯಾಸಗಳನ್ನು, ಹೋಮೋಫೋಬಿಯಾವನ್ನು ಉತ್ತಮ ಸಿನೆಮಾವೆಂದು ಮೆರೆದಾಡುವವರ ನಡುವೆ ಇದೊಂದು ಭರವಸೆಯ ಮೊಗ್ಗಾಗಿ ಕಾಣಿಸುತ್ತದೆ. ಸಿನೆಮಾಗೋಸ್ಕರ ಸಿನೆಮಾ ಮಾಡಬಹುದು, ಅದಕ್ಕೆ ತನ್ನದೇಯಾದ ಬೆಲೆ ಇದೆ ಅನ್ನೋದನ್ನಂತೂ ಈ ಸಿನೆಮಾ ಸಾರಿ ಹೆಳುತ್ತದೆ.  

ದಯವಿಟ್ಟು, ತಪ್ಪದೇ ನೋಡಿ.